ganga kalyana yojane 2024:ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಮತ್ತೆ ಉಚಿತ ಬೋರ್ ವೆಲ್ ಅರ್ಜಿಗಳು ಪ್ರಾರಂಭವಾಗಿದೆ.! ಈ ಕೂಡಲೇ ಅರ್ಜಿ ಸಲ್ಲಿಸಿ.
ganga kalyana yojane 2024 ಇದೀಗ ನಾವು ಎಲ್ಲ ರೈತ ಬಾಂಧವರಿಗೆ ಈ ಲೇಖನದ ಮೂಲಕ ನಾವು ತಿಳಿಸುವುದೇನೆಂದರೆ ಇದು ಈಗ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸರ್ಕಾರವು ರೈತರಿಗೆ ಬೋರ್ವೆಲ್ ಕೊರೆಸಿಕೊಳ್ಳಲು ಅವಕಾಶವನ್ನು ನೀಡಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.
ಈ ಯೋಜನೆಯ ಲಾಭ ಯಾರಿಗೆ ಸಿಗುತ್ತದೆ ಮತ್ತು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.
Table of Contents
ganga kalyana yojane 2024:
ಇದೀಗ ಕರ್ನಾಟಕ ಮೈನಾರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಯೋಜನೆಯ ಮೂಲಕ ಕೃಷಿಯನ್ನು ಬೆಳೆಯುತ್ತಿರುವಂತಹ ಹೊಲಗಳಿಗೆ ನೀರಾವರಿಯ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಒಂದು ಯೋಜನೆಯ ಮೂಲಕ ನೀವು ಕೊಳವೆಬಾವಿ ಮತ್ತು ತೆರೆದ ಬಾವಿಯನ್ನು ರಚಿಸಿ ಕೊಳ್ಳಬಹುದು. ಅದೇ ರೀತಿಯಾಗಿ ಪಂಪ್ ಸೆಟ್ಗಳನ್ನು ಸ್ಥಾಪಿಸಬಹುದಾಗಿದೆ. ಈ ಯೋಜನೆಯಡಿಯಲ್ಲಿ ಸರ್ಕಾರವು ಪ್ರತಿ ಬೋರ್ವೆಲ್ ಗೆ 1.50 ಲಕ್ಷಗಳವರೆಗೆ ಸಹಾಯಧನವನ್ನು ನೀಡುತ್ತಿದೆ. ಈ ಹಣವನ್ನು ಬೋರ್ವೆಲ್ ಕೊರೆಯಲು ಮತ್ತು ಪಂಪು ಸರಬರಾಜು ಹಾಗೂ ವಿದ್ಯುತ್ ಉಪಕರಣಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಇದೀಗ ಬೆಂಗಳೂರ್ ಅರ್ಬನ್ ಬೆಂಗಳೂರು ಗ್ರಾಮೀಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ 3.5 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು
- ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವವರು ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 90 ಸಾವಿರ ಮತ್ತು ನಗರ ಪ್ರದೇಶದಲ್ಲಿ 1.3ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕಾಗುತ್ತದೆ.
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕದ ನಿವಾಸಿ ಆಗಿರಬೇಕು.
- ಹಾಗೆ ಅರ್ಜಿದಾರರು ಕನಿಷ್ಠ ಅಥವಾ ಸಣ್ಣ ಕೃಷಿಕರಾಗಿರಬೇಕು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು
- ಅಭ್ಯರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಬಿಪಿಎಲ್ ಕಾರ್ಡ್
- ಹೊಲದ ಕುಡುವಿಕೆ ರಸ್ತೆ ಕಡತದ ನಕಲು
- ಬ್ಯಾಂಕ್ ಪಾಸ್ ಬುಕ್
- ಭೂಕಂದಾಯ ರಶೀದಿ ಪಾವತಿ
- ಸ್ವಯಂ ಘೋಷಣೆ ಪತ್ರ
- ಸುರಕ್ಷಿತ ಸ್ವಯಂ ಘೋಷಣೆ ಪತ್ರ
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ
- ಮೊದಲಿಗೆ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಆನಂತರ ಅರ್ಜಿಗೆ ಸಂಬಂಧಿಸಿದ ಮುಖಪುಟ ಪ್ರದರ್ಶಿತವಾಗುತ್ತದೆ.
- ನೀವು ಅದರಲ್ಲಿರುವ ಎಲ್ಲಾ ಅವಶ್ಯಕತೆ ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ.
- ನಾವು ಈ ಮೇಲೆ ತಿಳಿಸಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಆನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ಲಿಂಕ್ :
link- https://kmdc.karnataka.gov.in/31/ganga-kalyana-schmeme/en
ನಾವು ಈ ಮೇಲೆ ತಿಳಿಸುವ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಲೇಖನವು ನಿಮಗೆ ಇಷ್ಟ ಆದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.