ಇದೀಗ ನಿಮ್ಮ ಮೊಬೈಲ್ ನಲ್ಲಿ ಜಮೀನಿನ RTC ಗೆ ಆಧಾರ್ ಕಾರ್ಡ್ ಲಿಂಕ್, ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ.|Aadhar link to RTC online.

ಎಲ್ಲರಿಗೂ ನಮಸ್ಕಾರಗಳು ನಾವು ಈಗ ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವುದು ಏನೆಂದರೆ ನಿಮ್ಮ ಜಮೀನಿನ RTC ಗೆ ನೀವು ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಳ್ಳಿ.

ಇದೀಗ ರಾಜ್ಯ ಸರ್ಕಾರವು ರೈತರಿಗೆ ನೀವು ನಿಮ್ಮ ಹೊಲದ ಪಹಣಿಗಳಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವಂತೆ ಸರ್ಕಾರವು ಮಾಹಿತಿಯನ್ನು ನೀಡಿದೆ. ಅಷ್ಟೇ ಅಲ್ಲದೆ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವಂತಹ ಯೋಜನೆಗಳಾದ ಪಿಎಮ್ ಕಿಸನ್ ಬರ ಪರಿಹಾರ ಬೆಳೆ ಹಾನಿ ಪರಿಹಾರ ಸೇರಿದಂತೆ  ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲು ನೀವು ಮುಖ್ಯವಾಗಿ ನಿಮ್ಮ ಪಹನಿಗೆ ಆಧಾರ್ ಲಿಂಕ್ ಅನ್ನು ಮಾಡಿಸಿಕೊಳ್ಳುವುದು ಉತ್ತಮ.

Aadhar link to RTC online
Aadhar link to RTC online

ಆನ್ಲೈನ್ ಮೂಲಕ ಆರ್ ಟಿ ಸಿ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ

  • ಮೊದಲಿಗೆ ನೀವು ಕರ್ನಾಟಕ ಸರ್ಕಾರದ ಭೂಮಿ ನಾಗರಿಕ ಸೇವೆಗಳು ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ಆನಂತರ ಅದರಲ್ಲಿ ನೀವು ಆಧಾರ್ ಗೆ ಲಿಂಕ್ ಇರುವಂತ ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ ಮತ್ತು ಕ್ಯಾಪ್ಚಾ ಕೋಡನ್ನು ನೀವು ಎಂಟರ್ ಮಾಡಬೇಕಾಗುತ್ತದೆ.
  • ಆನಂತರ ನೀವು ಸೆಂಡ್ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ.
  • ಆನಂತರ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಡಿಪಿ ಬರುತ್ತದೆ.
  • ಆನಂತರ ನೀವು ಆ ಓಟಿಪಿಯನ್ನು ಎಂಟರ್ ಮಾಡಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಆಮೇಲೆ ನಿಮಗೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರನ್ನು ನಮೂದಿಸಬೇಕಾಗುತ್ತದೆ.
  • ಆನಂತರ ನೀವು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಓದಿಕೊಂಡು ವೆರಿಫೈ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಆನಂತರ ಅದರ ಕೆಳಗೆ ಹಸಿರು ಬಣ್ಣದ ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ನೀವು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡುವುದರ ಮೇಲೆ ಕ್ಲಿಕ್ ಮಾಡಬೇಕು.
  • ಆನಂತರ ನೀವು ಮುಂದಿನ ಹಂತದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ ನೀವು ಆಧಾರ್ ekyc ಯನ್ನು ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನಿಮ್ಮ ಮುಂದೆ ಹೊಸ ಡ್ಯಾಶ್ ಬೋರ್ಡ್ ಓಪನ್ ಆಗುತ್ತದೆ. ಅದರಲ್ಲಿ ಲಿಂಕ್ ಆಧಾರ್ ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಆನಂತರ ನಿಮ್ಮ ಭೂಮಿ ವಿವರಗಳು ಎಂಬ ಪುಟ ಓಪನ್ ಆಗುತ್ತದೆ. ಅದರಲ್ಲಿ ಭೂಮಿಯ ಮಾಹಿತಿಗಳನ್ನು ಎಂಬಲ್ಲಿ ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು.
  • ಆನಂತರ ನೀವು ನಿಮ್ಮ ಜಮೀನಿನ ಸರ್ವೆ ನಂಬರನ್ನು ಎಂಟರ್ ಮಾಡಿ ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಆನಂತರ ನೀವು ನಿಮ್ಮ ಆರ್ ಟಿ ಸಿ ಯಲ್ಲಿರುವಂತ ಮಾಲೀಕರು ಹೆಸರನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ನೀವು ಅವರ ಹೆಸರಿನಲ್ಲಿ ಆಧಾರ್ ಕಾರ್ಡ್ ಅನ್ನು ನೋಂದಣಿ ಮಾಡಬೇಕೆಂದರೆ ನೀವು ಲಿಂಕ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಆನಂತರ ನಿಮ್ಮ ಪಹನಿಗೆ ಯಶಸ್ವಿಯಾಗಿ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬ ಸಂದೇಶವು ನಿಮಗೆ ತೋರಿಸುತ್ತದೆ.

ಒಂದು ವೇಳೆ ನಾವು ಈ ಮೇಲೆ ತಿಳಿಸುವ ಮಾಹಿತಿ ನಿಮಗೆ ತಿಳಿಯದೆ ಹೋದರೆ ನೀವು ನಿಮ್ಮ ಹತ್ತಿರ ಇರುವಂತಹ ಗ್ರಾಮ ಒನ್ ಕರ್ನಾಟಕ ಒನ್ ಬೆಂಗಳೂರು ಒನ್ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದಂತ ಸೇವ ಕೇಂದ್ರಗಳ ಮೂಲಕ ಕೂಡ ನೀವು ಪಹನಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿಕೊಳ್ಳಬಹುದು.

Sorry! You are Blocked from seeing the Ads

ಬೇಕಾಗುವ ಅಗತ್ಯ ದಾಖಲೆಗಳು

WhatsApp Group Join Now
Telegram Group Join Now

ಪಹಣಿ
ಆಧಾರ್ ಕಾರ್ಡ್
ಮೊಬೈಲ್ ಫೋನ್

ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರ ಹಾಗೂ ನಿಮ್ಮ ಕುಟುಂಬದವರಿಂದ ಹಂಚಿಕೊಳ್ಳಿ. ಲೇಖನವನ್ನು ಕೊನೆವರೆಗೂ ಇದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads